Thursday, January 28, 2010

ಬನ್ನಿ ಈ ಪತ್ರಿಕಾ ಸಂಗ್ರಾಹಕರ ಮನೆಗೆ.

ಮಂಗಳೂರಿನ ಪತ್ರಕರ್ತರಿಗೊಂದು ಅಪರೂಪದ ಅವಕಾಶವಿದು!
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಜನವರಿ ೩೧ರಂದು ಹಿರಿಯ ಪತ್ರಿಕಾಸಂಗ್ರಾಹಕ ಉಮೇಶ್ ರಾವ್‌ ಎಕ್ಕಾರು ಅವರ ಮನೆಗೇ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಅನುಭವ ಪಡೆದುಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಟೀಲು ಸಮೀಪದ ಎಕ್ಕಾರುವಿನಲ್ಲಿ ನೆಲೆಸಿರುವ ರಾವ್ ಅವರು ಅಪರೂಪದ ವ್ಯಕ್ತಿ. ಕಟೀಲು ಸಂಯುಕ್ತ ಪದವಿಪೂರ್ವ ಕಾಲೇಜಲ್ಲಿ ೩೫ ವರ್ಷ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಉಪಪ್ರಾಂಶುಪಾಲರಾಗಿ ನಿವೃತ್ತರಾದವರು. ಈಗ ಇವರಿಗೆ ೬೮ ವರ್ಷ ಪ್ರಾಯ. ಪತ್ರಿಕಾ ಸಂಗ್ರಹಣೆ ಇವರ ಪ್ರಿಯ ಹವ್ಯಾಸ. ಇವರಲ್ಲಿ ೨೦೦೦ಕ್ಕೂ ಅಧಿಕ ಪತ್ರಿಕೆಗಳ ಸಂಗ್ರಹ ಇದೆ, ೧೦೦೦ಕ್ಕೂ ಹೆಚ್ಚು ಕಥೆ-ಕವನಗಳು ನಾಡಿನ ವಿವಿಧ ಪತ್ರಿಕೆ-ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿರುವ ಇವರನ್ನು ದನ ಮೆಚ್ಚಿದ ಶಿಕ್ಷಕರೆಂದು ಕರೆಯಬಹುದು! ಯಾಕೆಂದರೆ ಇವರಿಗೆ ದನಗಳೆಂದರೆ ಅಚ್ಚುಮೆಚ್ಚು. ಕೇವಲ ಹಾಲುಕೊಡುವ ದನಗಳನ್ನಷ್ಟೇ ಅಲ್ಲ, ಗೊಡ್ಡು ದನಗಳನ್ನೂ ಇವರು ಸಾಕುವವರು.
ಇಂತಹವರಿಂದ ನಾವೆಲ್ಲ ಕಲಿಯುವಂತುಹುದು ಬೇಕಾದಷ್ಟಿದೆ, ಅವರಲ್ಲಿರುವ ವಸ್ತು ವಿಷಯ ಕೂಡಾ ಆಸಕ್ತಿದಾಯಕ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಅಲ್ಲಿ ಅಂದು ನಾವಿರೋಣ, ಕೆಲ ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಇರುತ್ತಾರೆ.....

2 comments:

Padyana Ramachandra said...

ಕರಾವಳಿ ಮಾಧ್ಯಮದ ಮೂಲಕ ಜನತೆಗೆ 'ಬನ್ನಿ ಈ ಪತ್ರಿಕಾ ಸಂಗ್ರಾಹಕರ ಮನೆಗೆ' ತಿಳಿಸಿದ ಪ್ರಕಟಿಸಿದ ಶ್ರೀ.ವೇಣು ವಿನೋದ್ ಅವರಿಗೆ ವಂದನೆಗಳು.

ನನ್ನ ತಂದೆ ಶ್ರೀ.ಪ.ಗೋಪಾಲಕೃಷ್ಣ (ಪ. ಗೋ.) ೧೯೬೩ -೧೯೬೪ ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ಸಂಜೆ ದಿನ ಪತ್ರಿಕೆ "ವಾರ್ತಾಲೋಕ" ಪ್ರಕಟಿಸುತ್ತಿದ್ದರು.

ಮಂಗಳೂರಿನ ಹಿರಿಯ ಪತ್ರಿಕಾಸಂಗ್ರಾಹಕ ಶ್ರೀ.ಉಮೇಶ್ ರಾವ್‌ ಎಕ್ಕಾರು ಅವರ ಸಂಗ್ರಹದಲ್ಲಿ ಮಂಗಳೂರಿನ ಅಂದಿನ ಕನ್ನಡ ಸಂಜೆ ದಿನ ಪತ್ರಿಕೆ "ವಾರ್ತಾಲೋಕ" ಇದರ ಪ್ರತಿ ಇದ್ದಲ್ಲಿ ದಯವಿಟ್ಟು ತಿಳಿಸಿ ಎಂಬ ಕೋರಿಕೆ ನನ್ನದು.

-ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್
Email:ramachandrap1983@yahoo.com

VENU VINOD said...

ಪ.ರಾಮಚಂದ್ರರೇ,
ನೀವು ಹೇಳಿರುವ ವಾರ್ತಾಲೋಕ ಪತ್ರಿಕೆಯ ಪ್ರತಿ ಉಮೇಶ್ ರಾಯರಲ್ಲಿ ಇದೆ. ನಿಮ್ಮ ಪ್ರತಿಕ್ರಿಯೆ ಇಂದಷ್ಟೇ ನೋಡಿದೆ, ತಡವಾಗಿ ಸ್ಪಂದಿಸಿದ್ದಕ್ಕೆ ಕ್ಷಮೆ ಇರಲಿ.
-ವೇಣುವಿನೋದ್.
(ಕರಾವಳಿ ಮಾಧ್ಯಮ ಪರವಾಗಿ)