ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಭೆ ಸರ್ವ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ಜ.೨೦ರಂದು ನೆರವೇರಿತು.
ಸಭೆಯಲ್ಲಿ ಚರ್ಚೆಯಾಗಿ ತೆಗೆದುಕೊಳ್ಳಲಾದ ಕೆಲವು ನಿರ್ಧಾರಗಳು. ಇಲ್ಲಿವೆ.
- ಅಪಘಾತ ವಿಮೆ ಮಾಡಿಸಿದರೆ ಅನೇಕ ಸಂದರ್ಭಗಳಲ್ಲಿ ಪತ್ರಕರ್ತರಿಗೆ ಯಾವುದೇ ನೆರವು ಸಿಗುವುದಿಲ್ಲ, ಅದರ ಬದಲಾಗಿ ಆರೋಗ್ಯ ವಿಮೆ ಮಾಡಿಸಿದರೆ ಹೆಚ್ಚಿನ ಅನಾರೋಗ್ಯಗಳೂ ಇದರಲ್ಲಿ ಒಳಗೊಂಡಿದ್ದು ಪತ್ರಕರ್ತರಿಗೆ ಅನುಕೂಲವಾಗಬಹುದು ಎಂಬ ವಿಷಯ ಚರ್ಚೆಯಾಯಿತು. ಈ ಬಗ್ಗೆ ಮುಂದೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಮುಂದಿನ ವರ್ಷಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
- ಮಂಗಳೂರಿನ ಲೇಡಿಹಿಲ್-ಉರ್ವಾಸ್ಟೋರ‍್ ರಸ್ತೆಗೆ ಪತ್ರಿಕಾಭವನ ರಸ್ತೆ ಎಂದು ನಾಮಕರಣ ಮಾಡುವ ಪ್ರಸ್ತಾವಕ್ಕೆ ಮಂಗಳೂರು ಮಹಾನಗರಪಾಲಿಕೆ ಒಪ್ಪಿಗೆ ಸೂಚಿಸಿದೆ, ಆದರೆ ಇದಕ್ಕೆ ಸರ್ಕಾರದ ಒಪ್ಪಿಗೆ ದೊರಕಬೇಕಿದೆ.
- ವಾಹನಗಳಲ್ಲಿ PRESS ಪದದ ದುರ್ಬಳಕೆ ಇದೀಗ ಮತ್ತೆ ಗರಿಕೆದರಿದೆ ಎಂಬ ದೂರು ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಇಲಾಖೆ ಮತ್ತೆ ಪತ್ರಕರ್ತರ ಗುರುತುಪತ್ರ ಪಡೆದು ಸೂಕ್ತ ಸ್ಟಿಕ್ಕರ್ ನೀಡುವಂತೆ ಒತ್ತಾಯಿಸಲು ನಿರ್ಧರಿಸಲಾಯಿತು. ಅಲ್ಲದೆ ನಕಲಿ ಸ್ಟಿಕ್ಕರ‍್ ಹಾವಳಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕೇಳಿಕೊಳ್ಳಲಾಗುವುದು.
- ಕಳೆದ ಬಾರಿ ಫಡಿಂಜೆ ವಾಳ್ಯಕ್ಕೆ ಪತ್ರಕರ್ತರ ಸಂಘದ ಸದಸ್ಯರು ಭೇಟಿ ನೀಡಿ ಸಮಗ್ರ ವರದಿ ಮಾಡಿರುವುದು ಶ್ಲಾಘನೆಗೊಳಗಾದ ವಿಚಾರವಾದ್ದರಿಂದ ಅಂತಹ ಗ್ರಾಮೀಣ ಭೇಟಿ ಕಾರ್ಯಕ್ರಮಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು. ಮುಂದೆ ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶವೊಂದಕ್ಕೆ ಭೇಟಿ ಹಮ್ಮಿಕೊಳ್ಳಲಾಗುವುದು.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೇರಿದ ಸಂಘದ ಸದಸ್ಯರ ಸಮಕ್ಷಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಗುರುವಪ್ಪ ಎನ್.ಟಿ.ಬಾಳೆಪುಣಿ ವರದಿ ಓದಿ ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷ ಶ್ರೀ ಹರ್ಷ, ಉಪಾಧ್ಯಕ್ಷ ಶ್ರೀ ರಾಮಕೃಷ್ಣ ಆರ‍್, ಕಾರ್ಯದರ್ಶಿ ಶ್ರೀ ಮಿಥುನ್ ಕೊಡೆತ್ತೂರು, ಶ್ರೀ ಪುಷ್ಪರಾಜ್ ಬಿ.ಎನ್ ಪಾಲ್ಗೊಂಡಿದ್ದರು.
1 comment:
ಇದು ಒಳ್ಳೆಯ ಬೆಳವಣಿಗೆ,ಇನ್ನೂ ಉಪಯುಕ್ತ ಮಾಹಿತಿಗಳು ಪತ್ರಕರ್ತರಿಗೆ ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ದೊರೆಯುವಂತಾಗಲಿ...ಶುಭವಾಗಲಿ..
Post a Comment